ಮಂಗ ಮತ್ತು ಮೊಸಳೆ | Interesting Animal story in Kannada for Kids 2025

ಮಂಗ ಮತ್ತು ಮೊಸಳೆ | Interesting Animal story in Kannada For Kids

 

 

ಮಂಗ ಮತ್ತು ಮೊಸಳೆ | Interesting Animal story in Kannada
Animal story in Kannada

Monkey and crocodile story in Kannada

ಒಂದು ವಿಶಾಲವಾದ ನದಿಯಲ್ಲಿ ಒಂದು ಮೊಸಳೆ ಮತ್ತು ಅದರ ಹೆಂಡತಿ ವಾಸವಾಗಿದ್ದವು. ಆ ನದಿಯಲ್ಲಿ ಮೀನುಗಳು ಕಡಿಮೆಯಾಗಿದ್ದರಿಂದ ಮೊಸಳೆಗಳು ಹಸಿದುಕೊಂಡೇ ನದಿಯಲ್ಲಿ ಅತ್ತಿಂದಿತ್ತ ಈಜಾಡುತ್ತಾ, ಯಾರಾದರೂ ತಮಗೆ ಆಹಾರ ಕೊಡುವರೇ ಎಂದು ದಿನವೂ ಕಾಯುತ್ತಿದ್ದವು.

ಹೀಗಿರುವಾಗ ಒಂದು ದಿನ ಗಂಡ ಮೊಸಳೆಯ ಕಣ್ಣಿಗೆ ಮರದ ಮೇಲಿರುವ ಮಂಗವೊಂದು ಬಿತ್ತು. ಆ ಮಂಗ ಏನನ್ನೋ ಚಪ್ಪರಿಸಿಕೊಂಡು ತಿನ್ನುತ್ತಿತ್ತು. ಆಗ ಮೊಸಳೆ ದಡಕ್ಕೆ ಬಂದು, “ಮಂಗಣ್ಣಾ, ಮಂಗಣ್ಣಾ… ನೀನು ಏನನ್ನು ತಿನ್ನುತ್ತಿರುವೆ ಎಂದು ಕೇಳಿತು.

ಆಗ ಮಂಗ,
“ಮೊಸಳೆ… ಮೊಸಳೆ… ಇದು ಮಾವಿನ ಹಣ್ಣು, ಇದು ತುಂಬಾ ಸಿಹಿಯಾಗಿರುತ್ತದೆ,” ಎಂದಿತು.

ಆಗ ಮೊಸಳೆ,
“ಮಂಗಣ್ಣಾ, ನನ್ನ ನದಿಯಲ್ಲಿ ಮೀನುಗಳು ಕಡಿಮೆ, ಇರುವ ಮೀನುಗಳು ತುಂಬಾ ಚಾಲಾಕಿ, ಅವು ನಮ್ಮ ಕೈಗೇ ಸಿಗದೆ ದೂರ ಈಜಿ ಹೋಗುತ್ತವೆ. ಹೀಗಾಗಿ ನಾನು ನನ್ನ ಹೆಂಡತಿ ಎಷ್ಟೋ ದಿವಸದಿಂದ ಹಸಿದುಕೊಂಡೇ ಇದ್ದೇವೆ. ಆಕೆ ನಾನು ಏನಾದರೂ ತರುತ್ತೇನೆ ಎಂದು ನನ್ನ ದಾರಿಯನ್ನೇ ಕಾಯುತ್ತಿರುತ್ತಾಳೆ… ನನಗೂ ಸ್ವಲ್ಪ ಹಣ್ಣುಗಳನ್ನು ಕಿತ್ತು ಕೊಡುವೆಯಾ.?” ಎಂದು ಕೇಳಿತು.

“ಅಯ್ಯೋ… ಅದಕ್ಕೇನಂತೆ? ಧಾರಾಳವಾಗಿ ಕಿತ್ತುಕೊಡುತ್ತೇನೆ. ಆದರೆ ನೀವು ಮಾಂಸಾಹಾರಿಗಳು, ಹಣ್ಣುಗಳನ್ನು ನೀವು ತಿನ್ನುವುದಿಲ್ಲವಲ್ಲಾ.” ಎಂದಿತು ಮಂಗ.

“ಹಸಿವಿನಿಂದ ಕಣ್ಣೆ ಕಾಣುತ್ತಿಲ್ಲ. ಈಗ ನಾವು ಏನು ಸಿಕ್ಕಿದರೂ ತಿಂದುಬಿಡುವ ಪರಿಸ್ಥಿತಿಯಲ್ಲಿದ್ದೇವೆ,” ಎಂದಿತು ಮೊಸಳೆ.

ಮಂಗನಿಗೆ ಅಯ್ಯೋ ಎನಿಸಿ, ಹಣ್ಣುಗಳನ್ನು ಕಿತ್ತು ಕೊಟ್ಟಿತು. ಹಣ್ಣು ತಿಂದ ಮೊಸಳೆ, “ಓ ಇದೆಷ್ಟು ಸಿಹಿಯಾಗಿದೆ!” ಎಂದು ಹೊಟ್ಟೆ ತುಂಬಾ ತಿಂದು, ತನ್ನ ಹೆಂಡತಿಗೂ ಹಣ್ಣುಗಳನ್ನು ತೆಗೆದುಕೊಂಡು ಹೋಯಿತು.

ಹೀಗೆ ಮೊಸಳೆ ದಿನಾ ಬಂದು ಹಣ್ಣು ತಿನ್ನುವುದು ಹೆಂಡತಿಗೆ ಕೊಂಡೊಯ್ಯುವುದು ನಡೆಯುತ್ತಿತ್ತು. ಮಂಗ ಮತ್ತು ಮೊಸಳೆ ಒಳ್ಳೆಯ ಸ್ನೇಹಿತರಾದವು. ಮಂಗ ಮೊಸಳೆಯ ಬೆನ್ನೇರಿ ಕುಳಿತು ನದಿಯಲ್ಲಿ ಸವಾರಿ ಮಾಡುತ್ತಾ, ಆಟವಾಡುತ್ತಾ ಇರುತ್ತಿತ್ತು. ತುಂಬಾ ದಿನಗಳ ಬಳಿಕ, ಮೊಸಳೆಯ ಹೆಂಡತಿ ತನ್ನ ಗಂಡನ ಬಳಿ, “ರೀ… ಮಂಗ ಕೊಡುವ ಈ ಹಣ್ಣುಗಳು ಎಷ್ಟು ರುಚಿ, ಎಷ್ಟು ಸಿಹಿಯಾಗಿರುತ್ತವೆ. ದಿನಾ ಇಂಥದ್ದೇ ಹಣ್ಣುಗಳನ್ನು ತಿನ್ನುವ ಮಂಗ ಇನ್ನೆಷ್ಟು ರುಚಿಯಾಗಿರಬಹುದು, ಅಲ್ವೇನ್ರಿ…?” ಎಂದಿತು.

“ಛೇ.. ಹಾಗೆಲ್ಲಾ ಹೇಳಬೇಡ! ಅವನು ನನ್ನ ಗೆಳೆಯ. ದಿನವೂ ನಮಗೆ ಹಣ್ಣು ಕೊಟ್ಟು ನಮ್ಮ ಹಸಿವನ್ನು ನೀಗಿಸುತ್ತಿದ್ದಾನೆ. ಅವನ ಹೃದಯ ತುಂಬಾ ಒಳ್ಳೆಯದು” ಎಂದಿತು ಮೊಸಳೆ. ಅದಕ್ಕೆ ಹೆಂಡತಿ, “ಅದೇ, ಅದೇ. ಅವನ ಹೃದಯ ತುಂಬಾ ಒಳ್ಳೆಯದು. ಅದು ಇನ್ನೂ ಸಿಹಿಯಾಗಿರುತ್ತದೆ. ನನಗೆ ಅವನ ಹೃದಯ ತಿನ್ನುವ ಆಸೆಯಾಗಿದೆ. ನನಗೆ ಅದು ಬೇಕೇ ಬೇಕು. ಇಲ್ಲದಿದ್ದರೆ ನಾನು ನಿಮ್ಮ ಹತ್ತಿರ ಮಾತನಾಡುವುದಿಲ್ಲ,” ಎಂದು ಅಳುತ್ತಾ ಕುಳಿತಿತು.

 

Top 5 Short Stories for Kids in Kannada | ಮಕ್ಕಳ ನೀತಿ ಕಥೆಗಳು

 

 

ಈಗ ಏನಪ್ಪಾ ಮಾಡೋದು. ಹೇಗಾದರೂ ಮಾಡಿ ಮಂಗನನ್ನು ಮನೆಯೊಳಕ್ಕೆ ಕರೆದುಕೊಂಡು ಬರಬೇಕು,’ ಎಂದುಕೊಳ್ಳುತ್ತಾ ಮೊಸಳೆ ಮಂಗ ಇದ್ದಲ್ಲಿಗೆ ಹೋಗಿ, “ಮಂಗಣ್ಣಾ, ನಿನ್ನನ್ನು ನನ್ನ ಹೆಂಡತಿ ಊಟಕ್ಕೆ ಕರೆದಿದ್ದಾಳೆ. ಈದಿನ ನೀನು ನಮ್ಮ ಮನೆಗೆ ಬರಲೇ ಬೇಕು,” ಎಂದಿತು. ಮಂಗನಿಗೆ ತುಂಬಾ ಸಂತೋಷವಾಯಿತು.

“ಆಗಲಿ ನಡಿ ಹೋಗೋಣಾ” ಎನ್ನುತ್ತಾ ಮಂಗ, ಮೊಸಳೆಯ ಬೆನ್ನೇರಿ ಕುಳಿತಿತು. ಹೀಗೆ ಸಾಗುವಾಗ ಮೊಸಳೆಗೆ ತುಂಬಾ ಬೇಸರವಾಯಿತು. ‘ನಮಗೆ ಉಣ್ಣಲು ಇಲ್ಲದ ಕಾಲದಲ್ಲಿ ಸಹಾಯ ಮಾಡಿದ ಮಂಗನನ್ನು ಇಂದು ನನ್ನ ಹೆಂಡತಿ ತಿಂದು ಬಿಡುತ್ತಾಳಲ್ಲಾ. ಏನಾದರೂ ಆಗಲಿ ಇವನಿಗೆ ಇದ್ದದ್ದು ಇದ್ದ ಹಾಗೆ ಹೇಳೋಣ. ಹೇಗೂ ನದಿಯ ನಡುವಲ್ಲಿದ್ದೇವೆ, ಮಂಗನಿಂದ ಇನ್ನು ದಡಕ್ಕೆ ಹೋಗುವುದು ಅಸಾಧ್ಯ,’ ಎಂದುಕೊಂಡು ಮೊಸಳೆ,

“ಮಂಗಾ ನಾನು ಈಗ ನಿನ್ನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗುತ್ತಿರುವುದು ಏಕೆಂದರೆ, ನನ್ನ ಹೆಂಡತಿ ನಿನ್ನ ಹೃದಯ ತಿನ್ನಬೇಕಂತೆ, ಅವಳಿಗೆ ತುಂಬಾ ಆಸೆಯಾಗಿದೆಯಂತೆ,” ಎಂದಿತು. ಒಂದು ಕ್ಷಣ ದಿಗಿಲುಗೊಂಡ ಮಂಗ, ತಕ್ಷಣ ಸಾವರಿಸಿಕೊಂಡು, ಮೊಸಳೆಯ ಮುಂದೆ ಏನನ್ನೂ ತೋರಿಸಿಕೊಳ್ಳದೆ,

“ಅಯ್ಯೋ ಮೊಸಳೆ… ನಾವು ಮಂಗಗಳು, ನಮ್ಮ ಹೃದಯವನ್ನು ಯಾವಾಗಲೂ ನಮ್ಮ ಮರದ ಮೇಲೆಯೇ ಇಟ್ಟಿರುತ್ತೇವೆ. ನೀನು ಮೊದಲೇ ಹೇಳಬಾರದೇ? ಆಗಲೇ ತೆಗೆದುಕೊಂಡು ಬರಬಹುದಿತ್ತು. ಬಾ ಈಗ ವಾಪಸ್ಸು ಹೋಗಿ, ಮರದಲ್ಲಿರುವ ಹೃದಯ ತರೋಣ,” ಎಂದಿತು.

‘ಆಗಲಿ’ ಎಂದು ವಾಪಸ್ಸು ದಡಕ್ಕೆ ಕರೆದುಕೊಂಡು ಬಂದಿತು ಮೊಸಳೆ. ದಡ ಸೇರಿದ ಕೂಡಲೇ ಮಂಗ ಚಂಗನೆ ಮರಕ್ಕೆ ಹಾರಿ, “ಹೋಗೋ, ಹೋಗು ಮೋಸಗಾರ ಮೊಸಳೆ! ನಿನಗೆ ಸಹಾಯ ಮಾಡಿದ ನನಗೆ ಇದೇನಾ ನೀನು ಮಾಡುವುದು. ನೀನು ಪರಮ ದುಷ್ಟ! ನನ್ನ ನಿನ್ನ ಗೆಳೆತನ ಇಂದಿಗೆ ಮುಗಿಯಿತು. ನಿನಗೆ ನಾನು ಹಣ್ಣುಗಳನ್ನೂ ಕಿತ್ತು ಕೊಡುವುದಿಲ್ಲ. ಹೋಗಾಚೆ! ” ಎಂದಿತು.

 

ನೀತಿ: ಅಪಾಯ ಬಂದಾಗ ಉಪಾಯದಿಂದ ಪಾರಾಗುವುದೇ ಜಾಣರ ಲಕ್ಷಣ.

 

Join Out WhatsApp Group

 

Monkey and crocodile story in Kannada, ಮಂಗ ಮತ್ತು ಮೊಸಳೆಯ ಕಥೆ, animal story in Kannada for Kids, kids stories in Kannada, Kannada moral stories for children, children’s stories in Kannada, Kannada fairy tales, bedtime stories in Kannada, Panchatantra stories Kannada, Kannada folk tales for kids, simple stories for kids in Kannada, animal fables Kannada, Kannada stories with morals.

 

 

FAQ

1. Why are stories like “Monkey and Crocodile” popular among kids?
Stories like “Monkey and Crocodile” offer simple yet meaningful moral lessons, making them engaging and educational for children.

2. How can animal stories in Kannada help children learn values?
Animal stories use relatable characters to teach kids about honesty, kindness, and other values in an enjoyable way.

3. What age group are these Kannada moral stories suitable for?
These Kannada stories are ideal for children aged 4-10, with simple language and easy-to-understand morals.

4. Are these stories based on traditional folk tales?
Yes, many are inspired by Panchatantra and traditional Kannada folk tales that teach morals through animal characters.

5. Can these Kannada stories be used for bedtime reading?
Absolutely! These short, moral-based stories are perfect for bedtime, helping kids relax and learn before sleep.

3 thoughts on “ಮಂಗ ಮತ್ತು ಮೊಸಳೆ | Interesting Animal story in Kannada for Kids 2025”

  1. Pingback: ಶಾಪಿತ ಮನೆ | Haunted House Horror story in Kannada 2025 - Kannada Reading

  2. Pingback: ಹಾವಿಗೆ ಹಾಲೆರದ ಮುದುಕಿ | Interesting Kannada Makkala Kathegalu 2025 - Kannada Reading

  3. Pingback: ಬುದ್ದಿವಂತ ಕಾಗೆಗಳು | Super Kannada Simple Short Story - Kannada Reading

Leave a Comment

Your email address will not be published. Required fields are marked *

Scroll to Top