50 Kannada Jokes for Reading | Interesting ಕನ್ನಡ ಜೋಕ್‌ಗಳು

50 Kannada Jokes for Reading | ಕನ್ನಡ ಜೋಕ್‌ಗಳು

 

 

50 Kannada Jokes for Reading
50 Kannada Jokes for Reading

 

10 ನಿಮಿಷ

ಗಂಡ : ಇನ್ನೂ ಅಡುಗೆ ಆಗಿಲ್ಲಾ?
ನನಗೆ ಹಸಿವಾಗ್ತಾ ಇದೆ. ಹೋಟೆಲ್‌ಗೆ   ಹೋಗ್ತಿನಿ.

ಹೆಂಡತಿ: ಆಯ್ತು 10 ನಿಮಿಷ ತಡ್ಕೊಳ್ಳಿ,

ಗಂಡ: 10 ನಿಮಿಷದಲ್ಲಿ ಅಡುಗೆ ಮಾಡಿ ಬಿಡ್ತೀಯಾ?
ಹೆಂಡತಿ: ಇಲ್ಲರೀ, ಅಷ್ಟರಲ್ಲಿ ನಾನು ರೆಡಿ ಆಗಿ ಬರ್ತೀನಿ.

ಸಾಮ್ಯತೆ

ಮಂಕ:  ಫೇಸಬುಕ್ , ಫ್ರಿಜ್‌ಗೂ ಏನು ಸಾಮ್ಯತೆ ಇದೆ?

ಗೆಳೆಯ: ಎರಡರಲ್ಲಿಯೂ ಏನೂ ಇಲ್ಲ ಅಂತ ಗೊತ್ತಿದ್ದರೂ ದಿನದಲ್ಲಿ ಹತ್ತು ಬಾರಿ ತೆರೆಯುತ್ತೇವೆ!

ಅಂಗನವಾಡಿ?

ಕಿಟ್ಟ: ನಂಗೆ ಹದಿನೆಂಟು ಜನ ಮಕ್ಕಳು. ತಿಮ್ಮ: ಫ್ಯಾಮಿಲಿ ಪ್ಲಾನಿಂಗ್ ನೋಡುವವರು ನಿಮ್ಮ ಮನೆಗೆ ಬಂದು ಇಲ್ಲೀ ತನಕ ವಿಚಾರಿಸಲೇ ಇಲ್ಲವಾ? ಕಿಟ್ಟ: ಒಮ್ಮೆ ಬಂದಿದ್ರು.

“ಅಂಗನವಾಡಿ’ಅಂಡ್ಕೊಂಡು ಹಾಗೇ ವಾಪಸು ಹೊರಟು ಹೋದ್ರು!😂

 ಗುಂಡನಿಗೆ ರಜೆ

ಕಚೇರಿಗೆ ಫೋನ್ ಮಾಡಿದ ರಾಣಿ, ಮ್ಯಾನೇಜರ್ ಅವರನ್ನು ಸಂಪರ್ಕಿಸಿದರು.

‘ನಿಮ್ಮಲ್ಲಿ ಕೆಲ್ಸ ಮಾಡೋ ಗುಂಡ ಅನ್ನೋವರನ್ನ ಅರ್ಧ ದಿನ ರಜೆ ಮೇಲೆ ಕಳಿಸಿಕೊಡಿ ಸಾರ್

”ತಾವು ಯಾರು?”

ಅವರ ಪತ್ನಿ. ಮನೆಗೆ ನೆಂಟರು ಬಂದಿದ್ದಾರೆ. ಕೆಲಸದವಳು ಕೈಕೊಟ್ಟಿದ್ದಾಳೆ. ಪಾತ್ರಗಳ ರಾಶೀನೇ ಬಿದ್ದಿದೆ ಅದಕ್ಕೆ,

 ‘ರಜಾ ಬೇಡಮ್ಮ ಹಾಗೆ ಕಳಿಸಿಕೊಡ್ತೀನಿ’, ಎಂದರು ಅನುಭವಿ ಮ್ಯಾನೇಜರ್.



ಸುಲಭ ಶೌಚಾಲಯ

ಮಗ : ಅಪ್ಪಾ, ಏನೂ ಕೆಲಸ ಮಾಡದೆ ದುಡಿಮೆ ಮಾಡೋ ಉದ್ಯೋಗ ಯಾವುದಾದ್ರೂ ಇದ್ರ ಹೇಳಪ್ಪ

ಅಪ್ಪ : ನಂಗೊತ್ತಿಲ್ಲ ಮಗನೇ, ಕೆಲಸವನ್ನೇ ಮಾಡದೆ ಹಣ ಸಿಗೋಕೆ ಹೇಗೆ ಸಾಧ್ಯ ?

ಮಗ : ಹಾಗಲ್ಲಪ್ಪ, ನನಗೆ ಕೆಲಸ ಇರಬಾರದು. ಬೇರೆಯವರೆಲ್ಲಾ ಅವರವರ ಕೆಲಸ ಮಾಡಿಕೊಂಡು ಹೋಗ್ತಾ ಇರಬೇಕು. ನಮಗೆ ಹಣ ಬರ್ತಾ ಇರಬೇಕು

ಅಪ್ಪ : ಹಾಗಿದ್ದರೆ ಒಂದು ‘ಸುಲಭ ಶೌಚಾಲಯ’ ಶುರು ಮಾಡು !!!

ಕುಡುಕ್ ನನ್ ಮಕ್ಲು

 ಡಿಜೆ : ಸರ್, ಎಸ್ಟ್ ಹೊತ್ ತನಕ ಡ್ಯಾನ್ಸ್‌ಗೆ

 ಮಾಲೀಕ: 6-7 ಪೆಗ್ ಹಾಕೋ ತನಕ ಮಾತ್ರ.

ಡಿಜೆ : ಆಮೇಲೆ

ಮಾಲೀಕ : ಕುಡುಕ್ ನನ್ ಮಕ್ಲು, ಜೆನರೇಟರ್ ಸೌಂಡಿಗೇ ಕುಣೀತಾವೆ😂😂

 ಸಾಲ ಮಾಡಿ ಮದುವೆ ಮಾಡ್ಕೊಳ್ತಿದ್ದೆ…!

ತಿಮ್ಮಸಾಲ ಮಾಡಿ ಕಾರು ಖರೀದಿಸಿದ್ದ. ಮರು ಪಾವತಿ ಮಾಡದ ಕಾರಣ ಸ್ವಲ್ಪ ಸಮಯದ ನಂತರ ಬ್ಯಾಂಕ್‌ನವರು ಕಾರನ್ನು ತೆಗೆದುಕೊಂಡು ಹೋದರು. ಆಗ ತಿಮ್ಮ ಹೀಗಾಗುತ್ತದೆ ಎಂದು ನನಗೆ ಮೊದಲೇ ಗೊತ್ತಿದ್ದರೆ ನನ್ನ ಮದುವೆಗೆ ಕೂಡ ಸಾಲ ತಗೊಳ್ತಿದ್ದೆ ಎಂದು ಮರುಗಿದ.

ಮುಂದಿನ ಜನ್ಮ

ಗುಂಡ: ನಾನು ಮುಂದಿನ ಜನ್ಮದಲ್ಲಾ ದರೂ ನಾಯಿಯಾಗಿ ಹುಟ್ಟಬೇಕು ಎಂದು ದೇವರನ್ನು ಬೇಡಿಕೊಳ್ಳುವೆ. ತಿಮ್ಮ: ಯಾಕೋ, ಅಂತಹ ಆಸೆ ನಿನಗೆ, ನಾಯಿಯ ಜನ್ಮ ಬಯಸು ವಂತಹ ಮನಸ್ಸು ನಿನಗೆ ಯಾಕೆ ಬಂತು?

ಗುಂಡ: ನನ್ನ ಹೆಂಡತಿ ನಾಯಿಯನ್ನು ಕಂಡರೆ ಮಾತ್ರ ಹೆದರುವಳು. ಅದಕ್ಕೆ ನಾನು ಮುಂದಿನ ಜನ್ಮದಲ್ಲಿ ನಾಯಿ ಯಾಗಿ ಹುಟ್ಟಲು ಬಯಸುವೆನು.

ಪಂಚ್ ಡೈಲಾಗ್

ಡಾಕ್ಟರ್ : ನಮ್ಮ ಆಸ್ಪತ್ರೆಯ ಪ್ರಚಾರಕ್ಕಾಗಿ ಒಂದು ಒಳ್ಳೆಯ ಪಂಚ್ ಡೈಲಾಗ್ ಹೇಳಿ..

ಗುಂಡ : ” ಕರ್ಕೊಂಡ್ ಬನ್ನಿ, ಹೊತ್ಕಂಡ್ ಹೋಗಿ, ಹಣ ನಮಗೆ, ಹೆಣ ನಿಮಗೆ “

ಗಂಡ ಬೇಕಾಗಿದ್ದಾನೆ.

ಗಂಡ : ನಾನು ತಪ್ಪಿಸಿಕೊಂಡ್ರೆ ನೀನೇನು ಮಾಡ್ತೀಯಾ ?

ಹೆಂಡತಿ : ಪೇಪರ್‌ನಲ್ಲಿ ಜಾಹಿರಾತು ಕೊಡ್ತೀನಿ.

ಗಂಡ : ವಾಹ್ ! ಏನಂತ ಕೊಡ್ತೀಯಾ?

ಹೆಂಡತಿ : ಗಂಡ ಬೇಕಾಗಿದ್ದಾನೆ.

50 Kannada Jokes for Reading


 

ವ್ಯತ್ಯಾಸ 

ಟೀಚರ್ :”ಪ್ರಸಾದ್ , ಸೀನಿಯರ್ ಗೂ ಜೂನಿಯರ್ ಗೂ ಇರೋ ವ್ಯತ್ಯಾಸವೇನೋ..??”

ಪ್ರಸಾದ್ :-  ಟೀಚರ್, ಸಮುದ್ರದ ಹತ್ತಿರ ವಾಸ ಮಾಡುವವರನ್ನು ಸೀನಿಯರ್ ಎಂದೂ, ಮೃಗಾಲಯದ ಹತ್ತಿರ ವಾಸಿಸುವವರನ್ನು ಜೂನಿಯರ್ ಎಂದೂ ಕರೆಯುತ್ತಾರೆ.

 ಹಾರುವ ತಟ್ಟೆ

ಟೀಚರ್ : ಹಾರುವ ತಟ್ಟೆಗಳು ಮೊದಲು ಎಲ್ಲಿ ಹಾಗೂ ಯಾರಿಗೆ ಕಾಣಿಸಿದ್ದು ?

ಲೋಕೆಶ್ : ನಮ್ಮ ಮುತ್ತಾತಂದಿರು ಮೊದಲ ಹಾರುವ ತಟ್ಟೆಯನ್ನು ನೋಡಿದ್ದು, ಹಬ್ಬಕ್ಕೆ ಅಜ್ಜಿಗೆ ಹೊಸ ಸೀರೆ ಕೊಡಿಸದಿದ್ದದ್ದಾಗ ಅಡುಗೆಮನೆ ಯಿಂದ ಅಜ್ಜನ ಕಡೆಗೆ ಹಾರು ತಟ್ಟೆಗಳು ಹಾರಿ ಬರುತ್ತಿದ್ದವು.

 ABCD

“ABCD” ಯಲ್ಲಿ

“B”ಗೆ ತುಂಬಾ ಚಳಿ” ಯಾಕೆ ಗೊತ್ತ..? ಅದು “AC” ಮಧ್ಯೆ ಇದೆ ಅದಕ್ಕೆ..

 “C” ತುಂಬಾ ಕೆಮ್ಮುತ್ತೆ  ಯಾಕೆ ಗೊತ್ತ..? ಅದು “BD” ಮಧ್ಯೆ ಇದೆ ಅದರೆ…

 “B” ಸಿಕ್ಕಾಪಟ್ಟೆ ಫಿಲ್ಮ್ ನೋಡುತ್ತ ಯಾಕಂದ್ರ CD ಅದರ ಮುಂದಿರುತ್ತೆ…

ರನ್ನಿಂಗ್ ರೇಸ್

ಹುಡುಗಿ:- ಹೊಸ ಮೊಬೈಲ್ ಎಲ್ಲಿ ತಗೊಂಡೆ?

ಹುಡುಗ:- ರನ್ನಿಂಗ್ ರೇಸ್ ನಲ್ಲಿ ವಿನ್ ಆಗಿದ್ದು

ಹುಡುಗಿ:- ಎಷ್ಟು ಜನ ಓಡಿದ್ರು…?

ಹುಡುಗ: ” ಮೊಬೈಲ್ ಮಾಲೀಕ , ಪೋಲಿಸ್ ,ನಾನು”

ಹುಡುಗಿ:- ಸ್ತಬ್ಧ

ಬಾಳೆ ಹಣ್ಣು

ಬಾಳೆ ಹಣ್ಣು ತಿನ್ನುವುದರಿಂದ ಎಲುಬುಗಳು ಗಟ್ಟಿಯಾಗುತ್ತವೆ.

ಅದರ ಸಿಪ್ಪೆಯ ಮೇಲೆ ಕಾಲಿಟ್ಟರೆ ಎಲುಬುಗಳು ಪುಡಿ ಪ್ರಡಿಯಾಗುತ್ತದೆ

ಒಂದು ಪಿಂಪಲ್

ರಂಗ: ನನ್ನ ಮುಖದಲ್ಲಿ ಒಂದು ಪಿಂಪಲ್ ಇತ್ತು. ನಿನ್ನೆ ನಾನು ಅದನ್ನು ಒಡೆದುಬಿಟ್ಟೆ. ಆಮೇಲೆ ಏನಾಯ್ತು ಗೊತ್ತಾ?

ಬೆಂಗ: ಏನಾಯ್ತು?

ರಂಗ: ಇವತ್ತು ಅದು ಅವರ ಕುಟುಂಬನ ಕರ್ಕೊಂಡು ಜಗಳಕ್ಕೆ ಬಂದಿದೆ. ನೋಡು ನನ್ನ ಮುಖ ಫುಲ್ ಪಿಂಪಲ್ ಆಗಿವೆ.

Jokes in kannada for whatsapp

ಎಸ್. ಎಸ್.ಎಲ್.ಸಿ ರಿಸಲ್ಟ್

ಅಪ್ಪಮಗನೊಂದಿಗೆ, ಇವತ್ತು ನಿನ್ನ ಎಸ್. ಎಸ್.ಎಲ್.ಸಿ ರಿಸಲ್ಟ್   ಬರುವುದು.

ಮಗ: ಹೌದು.

ಅಪ್ಪ: ಎಲ್ಲಿಯಾದರೂ ನೀನು ಫೇಲ್ ಆಗಿ ಬಿಟ್ರೆ ನಾನು ನಿನ್ನ ಅಪ್ಪ ಎಂಬುದನ್ನು ಮರೆತುಬಿಡು. ನನಗೂ ನಿನಗೂ ಮತ್ತೆ ಯಾವುದೇ ರೀತಿಯ ಸಂಬಂಧ ಇಲ್ಲ.

ಮರುದಿನ

ಅಪ್ಪ : ನಿನ್ನ ದಿನ ಏನಾಯಿತೋ?

 ಮಗ: ಅದನ್ನು ಕೇಳಲಿಕ್ಕೆ ನೀನ್ಯಾರೋ?

ಲೂಸ್ ತಗೊಂಡರೆ

ಗಿರಾಕಿ: ಒಂದು ಕೆ.ಜಿ ಚಿಪ್‌ಗೆ ಎಷ್ಟು ರೂಪಾಯಿ

ವ್ಯಾಪಾರಿ: 80 ರೂಪಾಯಿ

ಗಿರಾಕಿ: ಲೂಸ್ ತಗೊಂಡರೆ.

ವ್ಯಾಪಾರಿ: ಯಾರ್ ತಗೊಂಡ್ರು ಅಷ್ಟೆ.

30 ವರ್ಷ ಅನುಭವ

ಸಂದರ್ಶಕ: 20 ವರ್ಷ ವಯಸ್ಸಿನ ನೀನು 30 ವರ್ಷ ಅನುಭವ ಎಂದು ಹಾಕಿದ್ದೀಯಲ್ಲ?

ಅಭ್ಯರ್ಥಿ: ಓವರ್ ಟೈಮ್ ಮಾಡುತ್ತಿದ್ದೆ.

ಮರ್ಯಾದೆ

ಮಗು ; ಅಪ್ಪ ಇಲ್ಲಿ ಬಾ

ಅಮ್ಮ: ಈ ತರ ಎಲ್ಲ ಅಪ್ಪನನ್ನು ಕರೆಯ ಬಾರದು ಮರ್ಯಾದೆ ಇಂದ ಕರಿಬೇಕು

ಮಗು : ಅಪ್ಪ ಮರ್ಯಾದೆ ಇಂದ ಇಲ್ಲಿ ಬಾ

ದೇವದಾಸ್ ಆಗ್ತಾರೆ ಯಾಕೆ

ಹುಡುಗರು ದೇವದಾಸ್ ಆಗ್ತಾರೆ ಯಾಕೆ ?

ಹುಡುಗಿಗಾಗಿ.

ಅವಳ ಅಂದಕ್ಕಾಗಿ.

ಮನಸಿಗಾಗಿ.

ಪ್ರೀತಿಗಾಗಿ.

ಇವು ಯಾವುದಕ್ಕೂ ಅಲ್ಲ ಹುಡುಗಿ ಗೋಸ್ಕರ ಮಾಡಿದ ಸಾಲಕ್ಕಾಗಿ😁😁😁

ಡ್ರೈವಿಂಗ್ ಸಂಬಳ

ಬಾಸ್: ನನಗೆ ಒಬ್ಬ ಡ್ರೈವರ್ ಬೇಕು  ಸ್ಟಾರ್ಟಿಂಗ್ 2೦೦೦ ಕೊಡ್ತೀನಿ

ಗುಂಡ: ಏನ್ ಗ್ರೇಟ್ ಸರ್ ನೀವು ಸ್ಟಾರ್ಟಿಂಗ್  2೦೦೦ ಕೊಟ್ರೆ ಡ್ರೈವಿಂಗ್ ಸಂಬಳ ಎಷ್ಟು?

ಗೌಂಡ್ ಫ್ಲೋರ್ ನಲ್ಲೆ ಇರೋದು

ಸರ್ದಾರ್ ಬಸ್ ಸ್ಪಾಪ್ ನಲ್ಲಿ ಕಾಯ್ತಾ ಇದ್ದ

ಒಬ್ಬ ಬೈಕ್ ನಲ್ಲಿ ಬಂದ

ಮ್ಯಾನ್ : ಲಿಫ್ಟ್ ಬೇಕ?

ಸರ್ದಾರ್  : ಬೇಡ ನಮ್ಮ ಮನೆ ಗೌಂಡ್ ಫ್ಲೋರ್ ನಲ್ಲಿ ಇರೋದು.

ಮೈಸೂರ್ ಪಾಕ್ ಮಹಿಮೆ

ಗುಂಡ :  ಮೂರು ಹಲ್ಲು ಒಮ್ಮೆಲೆ ಹೇಗೆ ಹೋದವು?

ಗೆಳೆಯ : ಹೇಗೆ

 ಗುಂಡ:  ಹೆಂಡತಿ ಮಾಡಿದ ಮೈಸೂರು ಪಾಕು ತಿಂದು

ಗೆಳೆಯ  :  ಒತ್ತಾಯ ಏನಿತ್ತು? ಬೇಡ ಅಂತ ಹೇಳಬೇಕಿತ್ತು.

 ಗುಂಡ: ಹಾಗೆ ಹೇಳಿದ್ದರೆ , ಇರೋ ಮೂವತ್ತೆರಡು ಹಲ್ಲು ಉದುರುತಿತ್ತು… 😂😂

ಗಂಡಂದಿರೆಲ್ಲಾ ಚೆನ್ನಾಗಿದ್ದಾರಾ

 ಪರಿಚಿತ ವ್ಯಕ್ತಿ: ಏನಮ್ಮಾ ನಿನ್ನ ಗಂಡ ಚೆನ್ನಾಗಿದ್ದಾನಾ ?

ಹೆಂಗಸು : ಏನ್ ಸ್ವಾಮಿ, ನನ್ನ ಗಂಡನನ್ನು ಏಕವಚನದಲ್ಲಿ ಮಾತಾಡಿಸ್ತೀರಾ ?

ಪರಿಚಿತ ವ್ಯಕ್ತಿ  : (ಯೋಚಿಸಿ) ಕ್ಷಮಿಸು ತಾಯಿ ಗೊತ್ತಾಗಲಿಲ್ಲ, ನಿನ್ನ ಗಂಡಂದಿರೆಲ್ಲಾ ಚೆನ್ನಾಗಿದ್ದಾರಾ

😂😂😂

ಬಿಟ್ಟು ದೂರ ಹೋದ್ರೆ

ಹೆಂಡತಿ : ರೀ.. ನಾನೆಲ್ಲಾದ್ರು ನಿಮ್ಮನ್ನ ಬಿಟ್ಟು ದೂರ ಹೋದ್ರೆ ಏನ್ ಮಾಡ್ತೀರ?

 ಗಂಡ: ಹಾಗೆನಾದ್ರು ಆದ್ರೆ ಪೇಪರ್ ನಲ್ಲಿ ಟಿ.ವಿ.ನಲ್ಲಿ ಹಾಕುತ್ತಿವೆ.

ಹೆಂಡತಿ ಏನಂತ ಹಾಕುತ್ತಿರ?

ಗಂಡ : ನೀನು ಎಲ್ಲೇಯಿರು, ಹೇಗೇಯಿರು,ಅಲ್ಲೇಯಿರು!!!

ನಂಬಿಕೆ

ಬ್ಯಾಂಕಿನವರನ್ನು ನಂಬಿ ನಾವು ಕೋಟಿಗಟ್ಟಲೆ ಹಣ ಠೇವಣಿ ಇಡುತ್ತೇವೆ.

ನಮ್ಮನ್ನು ನಂಬದ ಅವರು 5 ರೂಪಾಯಿ ಪೆನ್ನನ್ನು ಕೂಡ ದಾರದಲ್ಲಿ ಕಟ್ಟಿ ಇಡುತ್ತಾರೆ.

😂😂😂



ಯಾವಾಗ ಬುದ್ದಿ ಬರುತ್ತೋ                                            

ಟೊಮ್ಯಾಟೊ ಬೆಳೆಗಾರರು ಪ್ರತಿಭಟನೆ ಮಾಡ್ತಾರೆ ಟೊಮ್ಯಾಟೊ ರಸ್ತೆಗೆ ಸುರಿತಾರೆ

ಹಾಲಿನವರು ಪ್ರತಿಭಟನೆ ಮಾಡ್ತಾರೆ ಹಾಲನ್ನ ರಸ್ತೆಗೆ ಸುರಿತಾರೆ

ಈ ಬ್ಯಾಂಕ್ ನವರಿಗೆ ಯಾವಾಗ ಬುದ್ದಿ ಬರುತ್ತೋ ಎನೋ

ನನ್ ಮಗಂದ್ … ಖುಷಿ

ಗುಂಡ ಒಂದೇ ಉಸಿರಿನಲ್ಲಿ ಓಡಿ ಬಂದು

ಗುಂಡ :- ಸಾರ್ ನನ್ನ ಹೆಂಡತಿ ನೆನ್ನೆ ರಾತ್ರಿಯಿಂದ ಕಾಯ್ತಾಯಿಲ್ಲ

ಪೋಸ್ಟ್ ಆಫಿಸರ್ :- ನಿನ್ನ ಹೆಂಡತಿ ಕಳೆದ್ ಹೊದ್ರೆ ಪೋಲಿಸ್ ಸ್ಟೇಷನ್ ಅಲ್ಲಿ ಕಂಪ್ಲೆಂಟ್ ಕೊಡು ಪೋಸ್ಟ್ ಆಫಿಸಿಗ್ ಯಾಕ್ ಬಂದಿದಿಯ

ಗುಂಡ :- ಓ ಓ ಸಾರಿ ಸಾರ್ ನನ್ ಮಗಂದ್ … ಖುಷಿಲಿ ಎಲ್ಲಿಗ್ ಹೋಗ್ಬೇಕು ಎನ್ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ ಸರ್😂😂

ಒಂದು ರೂಪಾಯಿ

ಭಿಕ್ಷುಕಿ : ಅಣ್ಣಾ.. ಮೂರು ದಿನದಿಂದ ಊಟ ಮಾಡಿಲ್ಲ.. ಒಂದು ರೂಪಾಯಿ ಕೊಡಿ..

ಗುಂಡ : ಮೂರು ದಿನಂದಿಂದ ಊಟ ಮಾಡಿಲ್ಲಾಂತಿಯಾ .. ಒಂದು ರೂಪಾಯಿ ನಲ್ಲಿ ಏನು ಮಾಡ್ತೀಯ

ಭಿಕ್ಷುಕಿ : ಎಷ್ಟು ಕೆಜಿ ಕಮ್ಮಿ ಆಗಿದ್ದೀನಿಂತಾ ನೋಡ್ತೀನಿ..

 

ಸ್ಟೈಲ್

ಯಮ : ನೀನು ಸಿಡಿಲು ಬಡಿದು ಸತ್ತೆ ಆದರೂ

 ಸತ್ತವ : ಆದರೂ ಏನು ಪ್ರಭು?

ಯಮ : ಸಾಯೋವಾಗ ಯಾಕೆ ನಗ್ತಾ ಇದ್ದೆ?

ಸತ್ತವ  : ಸಿಡಿಲು ಬರುವ ಮುನ್ನ ಮಿಂಚು ಬಂತು ಯಾರೋ ಬಡ್ಡಿಮಕ್ಲು ಫೋಟೋ ತೆಗೆತಾ ಇರ್ಬೇಕು ಅಂತಾ  ಕೊಟ್ಟೆ ಪ್ರಭು😁

 

 

ಸಿಂಹದಮರಿ 

ಅಪ್ಪ:ಲೋ…ಮಗನೇ ಯಾರಿಗೂ ಹೆದರಬೇಡ. ನೀನು ಸಿಂಹದಮರಿ ಕಣೋ…

ಮಗ:ಹೌದಪ್ಪಾ,ಟೀಚರ್ ಹಾಗೇ ಹೇಳ್ತಾರೆ, ನೀನು ಯಾವುದೋ ಪ್ರಾಣಿಗೆ ಹುಟ್ಟಿರಬೇಕು..ಅಂತ…!!!

😂😂😂😁

ಜನಮೇಜಯ 

ಟೀಚರ್ : ಪದ್ಮಾ| ಜನಮೇಜಯ ಎಂದರೇನು?

ಪದ್ಮ : ಮೇ ತಿಂಗಳ ಚುನಾವಣೆಯಲ್ಲಿ ಗೆದ್ದು ಬಂದ ಜನ ಮೇಡಂ

 

ಜನಗಣಮನ

ಅದೊಂದು ಪ್ರಾಥಮಿಕ ಪಾಠಶಾಲೆ, ತನಿಖೆ ಮಾಡಲು ಇನ್ಸ್ ಪೆಕ್ಟರ್ ಬಂದರು.

ಇನ್ಸ್‌ಪೆಕ್ಟರ್ : ಮಕ್ಕಳೇ… ನಿಮಗಿಷ್ಟವಾದ ಹಾಡು ಯಾವುದೆಂದು ಹೇಳಬಲ್ಲಿರಾ?

ಒಬ್ಬ ವಿದ್ಯಾರ್ಥಿ : ಜನಗನಮನ ಸಾರ್!

ಇನ್ಸ್‌ಪೆಕ್ಟರ್ : (ಸಂತೋಷಗೊಂಡು) ಭೇಷ್! ಭೇಷ್! ನಿಮಗೆ ರಾಷ್ಟ್ರಗೀತೆಯು ಏಕೆ ಇಷ್ಟವೆಂದು ಹೇಳಿ ನೋಡೋಣ?

ವಿದ್ಯಾರ್ಥಿ : ಅದನ್ನು ಹಾಡಿದ ಕೂಡಲೇ ನಾವು ಮನೆಗಳಿಗೆ ಹೋಗಬಹುದು ಸಾರ್!!

 

ಸೋಮಾರಿ

ಕಿಟ್ಟು : ಪುಟ್ಟು ಸ್ನಾನ ಆಯ್ತಾ?

ಪುಟ್ಟು : ನಾನು ನಿನ್ನಷ್ಟು ಸೋಮಾರಿ ಅಲ್ಲೋ? ಒಂದು ತಿಂಗಳ ಮುಂಚೇನೇ ಸ್ನಾನ ಮಾಡ್ಕೊಂಡ್ ಬಿಟ್ಟಿದ್ದೀನಿ.

ಕುಡಿದ ಮತ್ತಿನಲ್ಲಿರುವ ಯುವಕನ ಹಾಸ್ಯ ಸಂಭಾಷಣೆ :

 ಲವ್ ಮಾಡುವಾಗ ನನ್ನದೇ “ದರ್ಬಾರು”

ಲವ್ ಮಾಡಿದಾಗಲೂ ನನ್ನದೇ “ಕಾರುಬಾರು”

ಆದ್ರೆ ಲವ್ ಕಟ್ ಆಯ್ತು ನೋಡಿ

ಅವಳದು “ಕಾರು”, ನಂದು “ಬಾರು”.

 

 

ಸೀರೆ ಅಂಗಡಿ

ಜೀವನದಲ್ಲಿ ಸಹನಶೀಲತೆ ಮತ್ತು ಸಂಯಮ ಕಾಪಾಡುವುದನ್ನ ಕಲಿಯಲು

ಒಂದು ಸೀರೆ ಅಂಗಡಿ ತೆರೆದ್ ನೋಡಿ 😁😁

 

ಸಂಭಾಷಣೆ

ಹುಚ್ಚ 1: ನಾನು ವಿಧಾನಸೌಧನ ಖರೀದಿಸ್ತೀನಿ.

ಹುಚ್ಚ 2: ಸಾರೀ ಕಣೋ, ನಾನು ಅದನ್ನ ಮಾರೋ ಮೂಡ್ನಲ್ಲಿ ಇಲ್ಲ



 

100 Interesting Kannada Riddles with Answers | ಕನ್ನಡ ಒಗಟುಗಳು ಮತ್ತು ಉತ್ತರ Ogatugalu

 

Kannada jokes, ಹಾಸ್ಯ, Kannada humor, ಕನ್ನಡ ಜೋಕ್‌ಗಳು, funny Kannada one-liners, ಪತಿ-ಪತ್ನಿ ಜೋಕ್, ವಿದ್ಯಾರ್ಥಿ ಹಾಸ್ಯ, ಗೆಳೆಯರ ತಮಾಷೆ, ದೈನಂದಿನ ಹಾಸ್ಯ, Kannada comedy, short jokes in Kannada, ಕನ್ನಡ ಲಘು ಹಾಸ್ಯ, witty Kannada lines, ತಮಾಷೆಯ ಸಂಭಾಷಣೆ, Kannada punchlines.

Leave a Comment

Your email address will not be published. Required fields are marked *

Scroll to Top