ಹಳೆಯ ಮನೆ | Haunted House Horror story in Kannada (Ghost Stories)

ಒಂದು ಮನೆ ದೂರದ ಊರಿನ ಕೊನೆಯ ಭಾಗದಲ್ಲಿತ್ತು, ಜನರು ಅದನ್ನು “ಹೌಂಟೆಡ್ ಹೌಸ್” ಅಂತ ಕರೆಯುತ್ತಿದ್ದರು. ಅಲ್ಲಿ ಯಾರೂ ಕೂಡ ಹೋಗಲು ಧೈರ್ಯ ಪಡುತ್ತಿರಲಿಲ್ಲ. ಆ ಊರಿನ ಜನರು ಮಕ್ಕಳಿಗೆ ಆ ಮನೆಯ ಸಮೀಪ ಅಲ್ಲ ಆ ಮನೆಯ ದಾರಿಯಲ್ಲಿ ಕೂಡ ಹೆಜ್ಜೆಯಿಡಬೇಡ ಎಂದು ಎಚ್ಚರಿಕೆ ಕೊಡುತಿದ್ದರು.
ಅಲ್ಲಿಗೆ ಹತ್ತಿರ ಹೋದವರನ್ನು, ರಾತ್ರಿ ಕೆಟ್ಟ ವಾಸನೆ, ವಿಚಿತ್ರ ಶಬ್ದಗಳು ಅಲ್ಲಿನ ಜನರಿಗೆ ಭಯ ಪಡಿಸುತ್ತಿತ್ತು. ಅದು ನಮ್ಮಲೇ ಬರುತ್ತಿದೆ ಏನೋ ಎಂದು ಭಾಸವಾಗುತ್ತಿತ್ತು. ದಿನಾಲೂ ಮನೆಗೆ ಕಿಟಕಿಗಳನ್ನು ಮುಚ್ಚಿ ಬಾಗಿಲಿಗೆ ಬೀಗಹಾಕುತಿದ್ದರು. ಆದ್ರೆ ತೀರಾ ವಿಚಿತ್ರವೆಂದರೆ, ಯಾರಿಗೂ ಈ ಮನೆಯ ಮಾಲೀಕರ ಬಗ್ಗೆ ತಿಳಿಯುತ್ತಿರಲಿಲ್ಲ.
ಕಾಲ ಕಳೆಯುತ್ತಾ, ಓರ್ವ ಸಾಹಸಿ ಯುವಕ ಆಕಾಶನು ತನ್ನ ಸ್ನೇಹಿತರೊಂದಿಗೆ ಈ ಮನೆಗೆ ಹೋಗುವ ನಿರ್ಧಾರ ಮಡಿದ. ಆಕಾಶನು ಊರಿನ ಆ ಮನೆಯ ಹಳೆ ಕಥೆಗಳನ್ನು ಕೇಳಿ ಬೆಳೆದಿದ್ದ, ಆದರೆ ಇಂತಹ ಶಕ್ತಿಗಳಿಗೆ ಅವನು ನಂಬಿಕೆ ಇಡುತ್ತಿರಲಿಲ್ಲ. ಆಗ ಒಂದು ರಾತ್ರಿ, ಚಂದ್ರನ ಬೆಳಕಿನಲ್ಲಿ, ಅವನ ಸ್ನೇಹಿತರ ಜೊತೆಗೆ ಹೋದನು. ಆದರೆ ಅಲ್ಲಿನ ಶಬ್ದಗಳನ್ನು ಕೇಳಿ ಅವನ ಸ್ನೇಹಿತರು ಗಾಬರಿಯಿಂದ ಮನೆಗೆ ಓಡಿ ಹೋದರು. ಆಕಾಶ ಮಾತ್ರ ಧೈರ್ಯದಿಂದ ಹೋದ. ಅಲ್ಲಿ ಬೆರಳಕು ಮಾತ್ರ ಆ ಮನೆಯ ಬಾಗಿಲಿಗೆ ಹೋಗುವ ಧೈರ್ಯ ಮಾಡುವಂತೆ ಕಾಣುತ್ತಿತ್ತು.
ಮನೆ ಒಳಗೆ ಸದ್ದಿಲ್ಲದ ನಿಶಬ್ದ, ಕತ್ತಲು ಅವನನ್ನು ಬಾ ಎಂದು ಕರೆಯುತ್ತಾಯಿತ್ತು. ಅಲ್ಲಿ ವಿಲಕ್ಷಣ ಶಬ್ದಗಳು, ಗೋಡೆಗಳ ಮೇಲಿನ ಹಳೆಯ ಚಿತ್ರಗಳು, ಭಯಪಡಿಸುವ ಜೇಡರ ಬಲೆಗಳು ವಿಚಿತ್ರ ಗಿಡಗಳು ಅವುಗಳನ್ನು ನೋಡಿಯೇ ಜೀವ ಹೋಗುವಂತಿತ್ತು. ಆದರೆ ವಿಚಿತ್ರವೆಂದರೆ ಅಲ್ಲಿ ದೀಪವು ಉರಿಯುತ್ತಿತ್ತು. ಎಲ್ಲಿ ನೋಡಿದರೂ ಅಲ್ಲಿ ಅವನಿಗೆ ತನ್ನ ನೆರಳಿನ ಪ್ರತಿಬಿಂಬ ಕಾಣತೊಡಗಿತು, ಅದನ್ನು ಕಂಡು, ಆತಂಕ ಎಂದು ಕೂಡ ಹೆದರದವನು ಇವತ್ತು ಭಯಪಡುತ್ತಿದ್ದನು.
ನಿಶಬ್ದವಿದ್ದ ಸ್ಥಳ ಈಗ ವಿಚಿತ್ರವಾದ ಶಬ್ದ ಅವನ ಕಿವಿಗೆ ಕೇಳಿಸಿತು, ಕೇಳಿದ ಮೇಲೆ ಅವನಲ್ಲಿ ಇನ್ನು ಭಯ ಹೆಚ್ಚಾಗಿ ಅವನ ಹೃದಯ ಬಡಿತ ಅವನಿಗೆ ಕೇಳಿಸತೊಡಗಿತು. ಏನೇ ಆಗಲಿ ನಾನು ಅದನ್ನು ನೋಡೇ ಬಿಡ್ತೀನಿ ಅಂತ ನಿರ್ಧರಿಸಿದ. ಏನು ಎಂದು ಹುಡುಕುವಾಗ ಅವನ ಕಣ್ಣು, ಆ ಪಕ್ಕದ ಕೋಣೆಯಲ್ಲಿ ಬಿತ್ತು.
ಕೋಣೆಗಳಲ್ಲಿ ನಿಂತು ನೋಡಿದಾಗ ಅವನಿಗೆ ಪ್ರಾಚೀನ ಕಾಲದ ಬೂದಿಯ ಪುಸ್ತಕಗಳು, ಚಿನ್ನದ ಪದಕಗಳು ಮತ್ತು ಬಿಳಿ ಆಕೃತಿಯಾ ಮೂರ್ತಿ ಕಾಣಿಸಿತು. ಏನು ಎಂದು ನೋಡಲು ಹೋದಾ… ಆಗ ಆ ಆಕೃತಿ ಮನುಷ್ಯ ಆಗಿ ಪರಿವರ್ತನೆಯಾಗಿ ಬಿಳಿ ಸೀರೆ ಉಟ್ಟ ಪ್ರೇತವಾಗಿ ಪರಿವರ್ತನೆ ಗೊಂಡು ಎದುರು ಬಂದು ನಿಂತಿತು. ದೊಡ್ಡ, ಬಿಳಿ ಸೀರೆಯೊಡನೆ ನೋಡಿ, ಮುಖ ತೋರರಿಸದೆ ಕವರ್ ಮಾಡಿಕೊಂಡ.
ಅವಳು ಕೈಗಳಿಂದ ಅವನ ತಲೆ ಎತ್ತಿ, ಭಯಾನಕ ಶಬ್ದದಿಂದ “ನೀನು ಇಲ್ಲಿಗೆ ಏಕೆ ಬಂದಿದೀಯ ಹೇಳು?”
ಇದನ್ನು ಕೇಳಿದ ಆಕಾಶನಿಗೆ ಜೀವ ಹೋಗಿ ಬಂದಂಗಾಗಿ ಅಲ್ಲಿಂದ ಕಾಲುಕೀಳಲು ಪ್ರಾರಂಭಿಸಿದನು. ಆದರೆ ಪ್ರೇತವು ಎಲ್ಲ ಬಾಗಿಲನ್ನು ಮುಚ್ಚಿ “ನೀನು ಇಲ್ಲಿಂದ ಹೊರಹೋಗಲು ಸಾಧ್ಯವಿಲ್ಲ.” ಎಂದು ಹೇಳಿತು.
ಮಂಗ ಮತ್ತು ಮೊಸಳೆ | Animal Story in Kannada for Kids
ಹಳೆಯ ಮನೆ, Haunted House Kannada Story, Horror Story in Kannada, Ghost Stories Kannada, Kannada Stories, Haunted Mansion Kannada, Horror Tales Kannada, Scary Stories Kannada, Kannada Ghost Story, Haunted Places in Kannada, Kannada Mystery Story
Pingback: ಹುಟ್ಟಿನ ಗಿಡ ಮತ್ತು ಹಳೆಯ ಭೂತ | Interesting Kannada Horror stories - Kannada Reading